ಕಾಫಿ ಗಿಡದ ರೆಕ್ಕೆ ಬೋರರ್ ನಿಯಂತ್ರಣಕ್ಕೆ ನೂತನ ತಂತ್ರಜ್ಞಾನ
ಪ್ರಾಕೃತಿಕ ಅಸಮತೋಲನದ ಪರಿಣಾಮ ಮಳೆ ಬಿಸಿಲು ಹವಾಮಾನದ ವೈಪರಿತ್ಯದ ಕಾರಣ ಹೆಚ್ಚಾಗಿ ಸಣ್ಣ ಹಾಗೂ ದೊಡ್ಡ ರೋಬಸ್ಟಾ ಕಾಫಿ ಗಿಡಗಳ ಫಸಲಿನ ರೆಕ್ಕೆಗಳನ್ನು ನಾಶಪಡಿಸುವ ರೆಕ್ಕೆ ಬೋರರ್, ಶಾರ್ಟ್ ಹೋಲ್ ಬೋರರ್ ಅಥವಾ ಗಂಡು ತೂತು ಕೊರಕ ನಿಯಂತ್ರಣಕ್ಕೆ ಕಾಫಿ ಮಂಡಳಿ ಪರಿಸರ ಸ್ನೇಹಿ ನೂತನ ತಂತ್ರಜ್ಞಾನದ ಜೈಕೋಮ್ ಲೂರ್ ಟ್ರ್ಯಾಪ್ ಬಿಡುಗಡೆಗೊಳಿಸಿದ್ದು, ಬೆಳೆಗಾರರಿಗೆ ವಿತರಣೆಗೆ ಸಿದ್ಧತೆ ನಡೆಯುತ್ತಿದೆ.
ಜಿಲ್ಲೆಯ ಪ್ರಮುಖ ಬೆಳೆಯಾದ ಕಾಫಿಯಲ್ಲಿ ಕಂಡುಬರುವ ಕಾಯಿಕೊರಕ, ಬಿಳಿಕಾಂಡ ಕೊರಕ, ಎಲೆತುಕ್ಕು ರೋಗ ಹೀಗೆ ಹಲವು ಬಗೆಯ ಬಾಧೆಗಳ ಪರಿಣಾಮ ಬೆಳೆಗಾರನಿಗೆ ತಲೆನೋವಾಗಿ ಪರಿಣಮಿಸುತ್ತಿದೆ. ಇವುಗಳ ನಿಯಂತ್ರಣಕ್ಕೆ ಸಾಂಪ್ರದಾಯಿಕ, ಜೈವಿಕ ಹಾಗೂ ರಾಸಾಯನಿಕ ಕ್ರಮಗಳನ್ನು ಕೈಗೊಳ್ಳಬೇಕಾಗಿದ್ದರೂ ನಿರಂತರ ಹವಾಮಾನದ ವೈಪರಿತ್ಯ ದುಬಾರಿಯ ಕೀಟನಾಶಕಗಳ ಬಳಕೆ ಹಾಗೂ ಅಧಿಕ ಕೂಲಿಯಿಂದ ಬೆಳೆಗಾರರಿಗೆ ಇದು ಸಾಧ್ಯವಾಗದ ಮಾತಾಗಿದೆ.
ಜೋಕೋಮ್‌ಲೂರ್ ಟ್ರ್ಯಾಪ್ ಬಳಕೆಗೆ ಶಿಫಾರಸ್ಸು
ಕಳೆದ 5 ವರ್ಷಗಳಿಂದ ಕಾಫಿ ಗಿಡಗಳಲ್ಲಿ ಕಂಡು ಬರುವ ರೆಕ್ಕೆಬೋರರ್ ನಿಯಂತ್ರಣಕ್ಕೆ ಕಾಫಿ ಮಂಡಳಿಯ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯ ತಜ್ಞರ ತಂಡ ಸುದೀರ್ಘ ಸಂಶೋಧನೆ ನಡೆಸಿತು. ಡಿಸೆಂಬರ್ ತಿಂಗಳಲ್ಲಿ ಸಕಲೇಶಪುರ ದಲ್ಲಿ ನಡೆಸಿದ ಕಾಫಿ ಮಂಡಳಿಯ ಕ್ಷೇತ್ರೋತ್ಸವ ಕಾರ್ಯಾಗಾರದಲ್ಲಿ ಬೆಳೆಗಾರರಿಗೆ ಅನುಕೂಲವಾಗುವ ಅತೀ ಕಡಿಮೆ ಖರ್ಚಿನ ಪರಿಸರ ಸ್ನೇಹಿ ಜೋಕೋಮ್‌ಲೂರ್ ದ್ರಾವಣ ಹೊಂದಿರುವ ಟ್ರ್ಯಾಪ್ ಬಿ ಡುಗಡೆಗೊಳಿಸಿತು. ಬೆಳೆಗಾರರಿಗೂ ಟ್ರ್ಯಾಪ್ ಬಳಕೆ ಯ ಸಂಪೂರ್ಣ ಮಾಹಿತಿ ನೀಡಲಾಯಿತು.
ಕಾಫಿ ಮಂಡಳಿ ವಿತರಿಸುತ್ತಿರುವ ಜೋಕೋಮ್‌ಲೂರ್ ಟ್ರ್ಯಾಪ್ ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪ ಕೇಂದ್ರದಲ್ಲೂ ನಿಗಧಿತ ದರದಲ್ಲಿ ವಿತರಿಸಲಾಗುತ್ತಿದೆ.
ಟ್ರ್ಯಾಪ್ ಬಳಕೆ ಹೇಗೆ?
ವರ್ಷದ ಸೆಪ್ಟೆಂಬರ್‌ನಿಂದ ಡಿಸೆಂಬರ್ ತಿಂಗಳವರೆಗೆ ರೆಕ್ಕೆ ಬೋರರ್ ಕಾಫಿ ಗಿಡ ರೆಕ್ಕೆಗಳಿಗೆ ಬೋರರ್‌ಗಳು ಹೆಚ್ಚಾಗಿ ಬಾಧಿಸುತ್ತಿದ್ದು ಈ ಸಮಯದಲ್ಲಿ ಹುಳುಬಾಧಿತ ಒಣಗಿದ ಪ್ರತೀ ಗಿಡಗಳ ರೆಕ್ಕೆಗಳನ್ನು ಕತ್ತರಿಸಿ ಸಂಗ್ರಹ ಮಾಡಿ ಸುಟ್ಟು ಹಾಕುವುದು ಇಲ್ಲವೇ ಸೂಕ್ತ ಕೀಟ ನಾಶಕಗಳಾದ ಪ್ರೋಪಿಕೋನೋ ಜೋಲನ್ನು ಅಂಟು ದ್ರಾವಣದೊಂದಿಗೆ ಸಿಂಪಡಿಸುವುದು. ಆದರೆ ಈ ವಿಧಾನದಿಂದ ಪ್ರತೀ ಎಕರಿಗೆ 12 ಟ್ರ್ಯಾಪ್ ಗಳಂತೆ ಅಂದರೆ 20 ಗಿಡಕ್ಕೆ ಒಂದರಂತೆ ಜೋಕೋಮ್‌ಲೂರ್ ದ್ರಾವಣ ಹೊಂದಿರುವ ಟ್ರ್ಯಾಪ್ತೋ ಗಳನ್ನು ತೋಟಗಳಲ್ಲಿ ನೇತುಹಾಕಬೇಕು. ದ್ರಾವಣವು ಸಣ್ಣಗಿನ ರೆಕ್ಕೆ ಬೋರರ್ ಹುಳವನ್ನು ಆಕರ್ಷಿಸಿ ಟ್ರ್ಯಾಪ್ ನೊಳಗೆ ಹುಳುಗಳು ಟ್ರ್ಯಾಪ್ ತಳದಲ್ಲಿರುವ ನೀರಿನೊಳಗೆ ಬಿದ್ದು ಸಾಯುತ್ತವೆ. ಕಾಫಿ ಗಿಡಗಳಲ್ಲಿ ಕಂಡುಬರುವ ಕಾಯಿ ಕೊರಕವನ್ನು ಹಿಡಿಯುವ ಬ್ರೋಕಾ ಟ್ರ್ಯಾಪ್ ಗಳಂತೆ ಕಾರ್ಯನಿರ್ವಹಿಸಲಿದ್ದು ಉತ್ತಮ ಫಲಕಾರಿಯಾಗಲಿದೆ ಎಂಬುದು ತಜ್ಞರ ಅಭಿಪ್ರಾಯ.
ಈಗಾಗಲೇ ರಾಜ್ಯದ ಎಲ್ಲಾ ಕಾಫಿ ಮಂಡಳಿಗಳಲ್ಲಿ ಬೆಳೆಗಾರರಿಗೆ ಕೈಗೆಟುಕುವ ದರದಲ್ಲಿ ನೀಡುತ್ತಿದ್ದು ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪಕೇಂದ್ರದಲ್ಲಿಯೂ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೇಂದ್ರದಲ್ಲಿ ಕಾರ್ಯಾಗಾರಗಳ ಮೂಲಕ ಜೋಕೋಮ್‌ಲೂರ್ ಟ್ರ್ಯಾಪ್ ಬಳಕೆಯ ಬಗ್ಗೆ ಬೆಳೆಗಾರರಿಗೆ ಮಾಹಿತಿ ನೀಡಲಾಗುತ್ತದೆ .
ಕಾಫಿ ಮಂಡಳಿ ಬಿಡುಗಡೆಗೊಳಿಸಿರುವ ಪರಿಸರ ಸ್ನೇಹಿ ಜೋಕೋಮ್‌ಲೂರ್ ಟ್ರ್ಯಾಪ್ರ ಗಳು ರೆಕ್ಕೆ ಬೋರರ್ ನಿಯಂತ್ರಣಕ್ಕೆ ಫಲಕಾರಿಯಾಗಲಿದೆ.
ಕಾಫಿ ಮಂಡಳಿ ಬಿಡುಗಡೆಗೊಳಿಸಿರುವ ಪರಿಸರ ಸ್ನೇಹಿ ಜೋಕೋಮ್‌ಲೂರ್ ಟ್ರ್ಯಾಪ್ ಗಳು ರೆಕ್ಕೆ ಬೋರರ್ ನಿಯಂತ್ರಣಕ್ಕೆ ಫಲಕಾರಿಯಾಗಲಿದೆ. -ಡಾ. ಚಂದ್ರಪ್ಪ, ಉಪನಿರ್ದೇಶಕರು, ಕಾಫಿ ಸಂಶೋಧನಾ ಉಪಕೇಂದ್ರ ಚೆಟ್ಟಳ್ಳಿ. |
ಈ ನೂತನ ಕಾರ್ಯವಿಧಾನದ ಮೂಲಕ ಪ್ರತಿಯೊಬ್ಬ ಬೆಳೆಗಾರನು ಕಡಿಮೆ ಖರ್ಚಿನಲ್ಲಿ ಕಾಫಿ ತೋಟಗಳಲ್ಲಿ ಕಂಡುಬರುವ ರೆಕ್ಕೆ ಬೋರರನ್ನು ನಿಯಂತ್ರಿಸಬಹುದು. - ಡಾ. ಮಂಜುನಾಥ್ ರೆಡ್ಡಿ, ಕೀಟತಜ್ಞರು, ಕಾಫಿ ಸಂಶೋಧನಾ ಉಪಕೇಂದ್ರ ಚೆಟ್ಟಳ್ಳಿ |