ಆನೆ-ಮಾವುತರಿಗೆ ದೊರಕದ ಗೌರವಧನ
ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಂಡ ಆನೆಗಳ ಮಾವುತ, ಕಾವಾಡಿಗರಿಗೆ ನೀಡಬೇಕಾದ ಗೌರವಧನ ನೀಡದೆ ಬರಿಗೈಯಲ್ಲಿ ಕಳುಹಿಸಿರುವ ಬಗ್ಗೆ ಮಾವುತರು ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ತಿಂಗಳ ಕಾಲ ಮೈಸೂರು ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದ ಮಾವುತ, ಕಾವಾಡಿಗರು ತಮ್ಮ ಆನೆಯೊಂದಿಗೆ ಭಾನುವಾರ ಶಿಬಿರಕ್ಕೆ ಮರಳಿದ್ದು ವಾಡಿಕೆಯಂತೆ ಅರಮನೆ ಮಂಡಳಿ ನೀಡಬೇಕಾಗಿದ್ದ ರೂ 15,000 ಗೌರವಧನ ನೀಡಿಲ್ಲ ಎನ್ನುವ ಅಸಮಾಧಾನವನ್ನು ಮಾವುತ ಢೋಬಿ `ಶಕ್ತಿ’ಯೊಂದಿಗೆ ವ್ಯಕ್ತಪಡಿಸಿದ್ದಾರೆ.ಪ್ರತಿ ವರ್ಷ ಅರಮನೆ ಆವರಣದಿಂದ ಶಿಬಿರಕ್ಕೆ ಮರಳುವ ಸಂದರ್ಭ ಪ್ರತಿ ಆನೆಗಳ ಮಾವುತ ಕಾವಾಡಿಗರಿಗೆ ಗೌರವಧನ ನೀಡುತ್ತಿದ್ದರು. ಈ ಬಾರಿ ನೀಡಿಲ್ಲ ಎಂದಿರುವ ಢೋಬಿ ಮುಂದಿನ ವರ್ಷ ಇವರೇ ಜಂಬೂಸವಾರಿ ಮಾಡಿಕೊಳ್ಳಲಿ ಎಂದು ತಮ್ಮ ಬೇಸರ ಹೊರಹಾಕಿದ್ದಾರೆ.
ಈ ಸಂದರ್ಭ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಮಾವುತ, ಕಾವಾಡಿಗರನ್ನು ಸಮಾಧಾನಪಡಿಸಿ ಕಳಿಸಿ ಕೊಟ್ಟಿದ್ದಾರೆ. ಅರಣ್ಯ ಅಧಿಕಾರಿ ಗಳು ಜಂಬೂಸವಾರಿಯಲ್ಲಿ ಪಾಲ್ಗೊಂಡ ಮಾವುತ, ಕಾವಾಡಿಗರ ವಿವರಗಳನ್ನು ಕೊನೆಗಳಿಗೆಯಲ್ಲಿ ನೀಡಿದ ಕಾರಣ ಹಣ ನೀಡಲು ಆಗಿಲ್ಲ ಎಂದು ಅರಮನೆ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ಆಗಿರುವ ಕಾರಣ ಬ್ಯಾಂಕ್‌ನಿAದ ಹಣ ಡ್ರಾ ಮಾಡಲು ಸಾಧ್ಯವಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅವರವರ ಬ್ಯಾಂಕ್ ಖಾತೆಗೆ ಗೌರವಧನ ವರ್ಗಾವಣೆ ಮಾಡುವುದಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.