ಕೊಡಗು ಜಿಲ್ಲಾ ಪಂಚಾಯಿತಿ - ತಾಲೂಕು ಪಂಚಾಯಿತಿಗಳಿಗೆ ಮೀಸಲಾತಿ ನಿಗದಿ

ರಾಜ್ಯದ 31 ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳಿಗೆ ಮೀಸಲಾತಿ ನಿಗದಿಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶ ಹೊರಡಿಸಿದೆ. 

ಕೊಡಗು ಜಿಲ್ಲಾ ಪಂಚಾಯತ್‌ನ ಒಟ್ಟು 29 ಸ್ಥಾನಗಳಲ್ಲಿ 15 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಅನುಸೂಚಿತ ಜಾತಿಗೆ 4 ಸ್ಥಾನ ಇದ್ದು, ಇದರಲ್ಲಿ 2 ಸ್ಥಾನ ಮಹಿಳೆಯರಿಗೆ, ಅನುಸೂಚಿತ ಪಂಗಡಕ್ಕೆ 3 ಸ್ಥಾನಗಳಿದ್ದು, ಇದರಲ್ಲಿ 2 ಸ್ಥಾನ ಮಹಿಳೆಯರಿಗೆ, ಹಿಂದುಳಿದ ವರ್ಗ ‘ಅ’ಗೆ 6 ಸ್ಥಾನವಿದ್ದು, ಇದರಲ್ಲಿ 3 ಸ್ಥಾನ ಮಹಿಳೆಯರಿಗೆ, ಹಿಂದುಳಿದ ವರ್ಗ ‘ಬ’ 1 ಸ್ಥಾನವಿದ್ದು, ಅದನ್ನು ಮಹಿಳೆಗೆ ಮೀಸಲಿರಿಸಲಾಗಿದೆ. ಸಾಮಾನ್ಯ ವರ್ಗಕ್ಕೆ ಒಟ್ಟು 15 ಸ್ಥಾನವಿದ್ದು, ಅದರಲ್ಲಿ 7 ಸ್ಥಾನಗಳನ್ನು ಮಹಿಳೆಯರಿಗಾಗಿ ಮೀಸಲಿಡಲಾಗಿದೆ. 

ತಾಲೂಕು ಪಂಚಾಯಿತಿ

ಮಡಿಕೇರಿ ತಾಲೂಕು ಪಂಚಾಯಿತಿಯಲ್ಲಿ 12 ಸ್ಥಾನಗಳಿದ್ದು, ಇದರಲ್ಲಿ ಮಹಿಳೆಯರಿಗೆ 6 ಸ್ಥಾನ ಮೀಸಲಾಗಿದೆ. ಅನುಸೂಚಿತ ಜಾತಿಗೆ 1, ಅನುಸೂಚಿತ ಪಂಗಡಕ್ಕೆ 1 ಸ್ಥಾನವಿದ್ದು, ಅದನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಹಿಂದುಳಿದ ವರ್ಗ ‘ಅ’ಕ್ಕೆ 3 ಸ್ಥಾನಗಳಿದ್ದು, 2 ಸ್ಥಾನ ಮಹಿಳೆಯರಿಗೆ ಮೀಸಲಾಗಿದೆ. ಹಿಂದುಳಿದ ವರ್ಗ ‘ಬ’ 1 ಸ್ಥಾನವಿದ್ದು, ಅದು ಪುರುಷರಿಗೆ ನಿಗದಿಯಾಗಿದೆ. 6 ಸಾಮಾನ್ಯ ಸ್ಥಾನಗಳಿದ್ದು, ಇದರಲ್ಲಿ 2 ಮಹಿಳೆಯರಿಗೆ ಮೀಸಲಾಗಿದೆ. 

ಸೋಮವಾರಪೇಟೆ ತಾಲೂಕು ಪಂಚಾಯಿತಿಯಲ್ಲಿ 9 ಸ್ಥಾನಗಳಿದ್ದು, 5 ಸ್ಥಾನ ಮಹಿಳೆಯರಿಗೆ ಮೀಸಲಾಗಿದೆ. ಅನುಸೂಚಿತ ಜಾತಿಗೆ 2 ಸ್ಥಾನವಿದ್ದು, 1 ಮಹಿಳೆಯರಿಗೆ ಮೀಸಲು, ಅನುಸೂಚಿತ ಪಂಗಡಕ್ಕೆ 1 ಹಾಗೂ ಹಿಂದುಳಿದ ವರ್ಗ ‘ಬ’ಕ್ಕೆ 1 ಸ್ಥಾನಗಳಿದ್ದು, ಅವು ಮಹಿಳೆಯರಿಗೆ ಮೀಸಲಾಗಿದೆ. 5 ಸಾಮಾನ್ಯ ಸ್ಥಾನಗಳಿದ್ದು, 2 ಮಹಿಳೆಯರಿಗೆ ಮೀಸಲಾಗಿದೆ. 

ಕುಶಾಲನಗರ ತಾ.ಪಂ.ನಲ್ಲಿ 9 ಸ್ಥಾನಗಳಿದ್ದು, 5 ಮಹಿಳೆಯರಿಗೆ ಮೀಸಲಾಗಿದೆ. ಅನುಸೂಚಿತ ಜಾತಿಗೆ 1, ಅನುಸೂಚಿತ ಪಂಗಡಕ್ಕೆ 1 ಸ್ಥಾನವಿದ್ದು, ಮಹಿಳೆಯರಿಗೆ ಮೀಸಲಾಗಿದೆ. ಹಿಂದುಳಿದ ವರ್ಗ ‘ಅ’ಕ್ಕೆ 2 ಸ್ಥಾನಗಳಿದ್ದು, 1 ಸ್ಥಾನ ಮಹಿಳೆಗೆ ಮೀಸಲಾಗಿದೆ. 5 ಸಾಮಾನ್ಯ ಸ್ಥಾನಗಳಿದ್ದು, 2 ಮಹಿಳೆಯರಿಗೆ ಮೀಸಲಾಗಿದೆ. 

ವೀರಾಜಪೇಟೆ ತಾ.ಪಂ.ನಲ್ಲಿ 9 ಸ್ಥಾನಗಳಿದ್ದು, 5 ಮಹಿಳೆಯರಿಗೆ ಮೀಸಲಾಗಿದೆ. ಅನುಸೂಚಿತ ಜಾತಿಗೆ 1 ಮತ್ತು ಅನುಸೂಚಿತ ಪಂಗಡಕ್ಕೆ 1 ಸ್ಥಾನಗಳಿದ್ದು, ಅವು ಮಹಿಳೆಯರಿಗೆ ಮೀಸಲಾಗಿವೆ. ಹಿಂದುಳಿದ ವರ್ಗ ‘ಅ’ಕ್ಕೆ 2 ಸ್ಥಾನವಿದ್ದು, 1 ಮಹಿಳೆಯರಿಗೆ ಮೀಸಲಾಗಿದೆ. ಸಾಮಾನ್ಯ 5 ಸ್ಥಾನಗಳಿದ್ದು, 2 ಮಹಿಳೆಯರಿಗೆ ಮೀಸಲಾಗಿದೆ. ಪೊನ್ನಂಪೇಟೆ ತಾ.ಪಂ.ನಲ್ಲಿ 9 ಸ್ಥಾನಗಳ ಪೈಕಿ ಮಹಿಳೆಯರಿಗೆ 5 ಸ್ಥಾನ ನಿಗದಿಯಾಗಿದೆ. ಅನುಸೂಚಿತ ಜಾತಿಗೆ 1 ಸ್ಥಾನವಿದ್ದು, ಅದು ಮಹಿಳೆಯರಿಗೆ ಮೀಸಲಾಗಿದೆ. ಅನುಸೂಚಿತ ಪಂಗಡಕ್ಕೆ 3 ಸ್ಥಾನವಿದ್ದು, 2 ಮಹಿಳೆಯರಿಗೆ ಮೀಸಲಾಗಿದೆ. ಸಾಮಾನ್ಯ ವರ್ಗಕ್ಕೆ 5 ಸ್ಥಾನಗಳಿದ್ದು, 2 ಮಹಿಳೆಯರಿಗೆ ಮೀಸಲಾಗಿದೆ.